ಕರ್ನಾಟಕ ಸರ್ಕಾರ  |  ರಾಷ್ಟ್ರೀಯ ಆರೋಗ್ಯ ಅಭಿಯಾನ (NHM)
ಅಕ್ಷರ ಗಾತ್ರ:
ಮಾನ್ಯ ಮುಖ್ಯಮಂತ್ರಿಗಳು
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರದ ಲಾಂಛನ
ಕರ್ನಾಟಕ ಸರ್ಕಾರ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ

District Health & Family Welfare Department, Koppal
ಮಾನ್ಯ ಆರೋಗ್ಯ ಸಚಿವರು
ಮಾನ್ಯ ಆರೋಗ್ಯ ಸಚಿವರು
ಪ್ರಕಟಣೆಗಳು
ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು

ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು, ಕೊಪ್ಪಳ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಕೊಪ್ಪಳ
ಜಿಲ್ಲಾ ಆರೋಗ್ಯ ಇಲಾಖೆಯ ಪರಿಚಯ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ

ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲೆಯ ಸಮಗ್ರ ಸಾರ್ವಜನಿಕ ಆರೋಗ್ಯ ರಕ್ಷಣೆ, ತುರ್ತು ಚಿಕಿತ್ಸೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಎಲ್ಲ 28 ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಬದ್ಧವಾಗಿದೆ. ಜಿಲ್ಲೆಯಾದ್ಯಂತ 4 ತಾಲೂಕು ಆರೋಗ್ಯ ಕಚೇರಿಗಳು, 3 ಸಾರ್ವಜನಿಕ ಆಸ್ಪತ್ರೆಗಳು, 9 ಸಮುದಾಯ ಆರೋಗ್ಯ ಕೇಂದ್ರಗಳು, 47 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 173 ಉಪಕೇಂದ್ರಗಳು (145 HWC), 48 ಆಂಬ್ಯುಲೆನ್ಸ್‌ಗಳು, 18 ಜನೌಷಧಿ ಕೇಂದ್ರಗಳು ಹಾಗೂ 4 ರಕ್ತನಿಧಿ ಕೇಂದ್ರಗಳೊಂದಿಗೆ 24x7 ಸಾರ್ವಜನಿಕ ಸೇವೆ ಒದಗಿಸಲಾಗುತ್ತಿದೆ.

ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸುವುದು, ನವಜಾತ ಶಿಶುಗಳಿಗೆ ವಿಶೇಷ ಆರೈಕೆ (SNCU/NBSU), ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಪುನರ್ವಸತಿ (NRC), 4 ಉಚಿತ ಸಿಟಿ ಸ್ಕ್ಯಾನ್ ಕೇಂದ್ರಗಳು, ಸಾರ್ವತ್ರಿಕ ಲಸಿಕಾಕರಣ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ನಮ್ಮ ಪ್ರಮುಖ ಆದ್ಯತೆಗಳಾಗಿವೆ.

4 ತಾಲೂಕು ಆರೋಗ್ಯ ಕಚೇರಿಗಳುಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ
48 ಆಂಬ್ಯುಲೆನ್ಸ್ ವಾಹನಗಳ ಜಾಲ17 108 ವಾಹನ, 16 ಇಲಾಖಾ, 7 ತಾಯಿ-ಮಗು, 7 JSV
2 SNCU, 5 NBSU & 4 NRC ಕೇಂದ್ರಗಳುನವಜಾತ ಶಿಶು ಆರೈಕೆ & ಪೌಷ್ಟಿಕ ಪುನರ್ವಸತಿ
28 NHM ಯೋಜನೆಗಳು & ಉಚಿತ ಸಿಟಿ ಸ್ಕ್ಯಾನ್JSSY, RBSK, ABDM, AB-ArK, NTEP & 4 ಸಿಟಿ ಸ್ಕ್ಯಾನ್
ಸೂಚನಾ ಫಲಕ

ಪ್ರಕಟಣೆಗಳು & ಜಾಗೃತಿ ಚಿತ್ರಗಳು

1. ಆರೋಗ್ಯ ಮೂಲಸೌಕರ್ಯ

ಜಿಲ್ಲೆಯ ಆರೋಗ್ಯ ಮೂಲಸೌಕರ್ಯಗಳು

4 ತಾಲೂಕು ಆರೋಗ್ಯ ಕಚೇರಿಗಳ ವ್ಯಾಪ್ತಿಯಲ್ಲಿ ಉಪವಿಭಾಗ / ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ನಮ್ಮ ಕ್ಲಿನಿಕ್ ಹಾಗೂ ವಿಸ್ತರಣಾ ಕ್ಲಿನಿಕ್‌ಗಳು.

ತಾಲೂಕು ಆರೋಗ್ಯ ಕಚೇರಿಗಳು

ತಾಲೂಕು ಆರೋಗ್ಯ ಅಧಿಕಾರಿಗಳು (Taluk Health Officers)

ಪ್ರತಿ ತಾಲೂಕಿನ ಆರೋಗ್ಯ ಸಂಸ್ಥೆಗಳ ಆಡಳಿತ ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಮೇಲ್ವಿಚಾರಣೆ

ತಾಲೂಕುವಾರು ವಿವರ

ಅಧಿಕೃತ ತಾಲೂಕುವಾರು ಆರೋಗ್ಯ ಸಂಸ್ಥೆಗಳ ವಿವರ ಕೋಷ್ಟಕ

ಆರೋಗ್ಯ ಸಂಸ್ಥೆ (Facility)ಕೊಪ್ಪಳ
KOPPAL
ಗಂಗಾವತಿ
GANGAVATHI
ಕುಷ್ಟಗಿ
KUSHTAGI
ಯಲಬುರ್ಗಾ
YELBURGA
ಒಟ್ಟು
TOTAL
1ಉಪವಿಭಾಗ / ಸಾರ್ವಜನಿಕ ಆಸ್ಪತ್ರೆಗಳು—1113
2ಸಮುದಾಯ ಆರೋಗ್ಯ ಕೇಂದ್ರಗಳು (CHCs)23139
3ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs)131091547
4ಆರೋಗ್ಯ ಉಪ ಕೇಂದ್ರಗಳು (Sub-Centres)43533740173
ತಾಲೂಕುವಾರು ಒಟ್ಟು ಸಂಸ್ಥೆಗಳು (Grand Total)58674859232

* ಕೊಪ್ಪಳ ತಾಲೂಕಿನಲ್ಲಿ ಜಿಲ್ಲಾ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ 3 ನಮ್ಮ ಕ್ಲಿನಿಕ್, 3 UPHC ಮತ್ತು 10 ವಿಸ್ತರಣಾ ಕ್ಲಿನಿಕ್‌ಗಳು ಹೆಚ್ಚುವರಿಯಾಗಿ ಲಭ್ಯ. ಅಧಿಕೃತ ಮೂಲ: ಜಿಲ್ಲಾ ಆರೋಗ್ಯ ದಾಖಲೆ.

ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳು

ಉಪವಿಭಾಗ / ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು & ನಮ್ಮ ಕ್ಲಿನಿಕ್

ಉಚಿತ ರೋಗ ಪತ್ತೆ ಸೇವೆ

4 ಉಚಿತ ಸಿಟಿ ಸ್ಕ್ಯಾನ್ (CT Scan) ಕೇಂದ್ರಗಳು – ಸಾರ್ವಜನಿಕರಿಗೆ 100% ಉಚಿತ

ಕೊಪ್ಪಳ ಜಿಲ್ಲಾ ಆಸ್ಪತ್ರೆ ಹಾಗೂ ಗಂಗಾವತಿ, ಕುಷ್ಟಗಿ, ಯಲಬುರ್ಗಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಮತ್ತು ಅಪಘಾತ ತುರ್ತು ಪ್ರಕರಣಗಳಿಗೆ ಸಂಪೂರ್ಣ ಉಚಿತ ಸ್ಕ್ಯಾನಿಂಗ್ ಸೇವೆ.

ಸಂಪೂರ್ಣ ಉಚಿತ

ಜಿಲ್ಲಾ ಆಸ್ಪತ್ರೆ, ಕೊಪ್ಪಳ

24x7 ತುರ್ತು ಸೇವೆ ಲಭ್ಯ

ಸಂಪೂರ್ಣ ಉಚಿತ

ಉಪವಿಭಾಗ ಸರ್ಕಾರಿ ಆಸ್ಪತ್ರೆ, ಗಂಗಾವತಿ

24x7 ತುರ್ತು & ಒಪಿಡಿ ಸೇವೆ

ಸಂಪೂರ್ಣ ಉಚಿತ

ತಾಲೂಕು ಸಾರ್ವಜನಿಕ ಆಸ್ಪತ್ರೆ, ಕುಷ್ಟಗಿ

24x7 ತುರ್ತು & ಒಪಿಡಿ ಸೇವೆ

ಸಂಪೂರ್ಣ ಉಚಿತ

ತಾಲೂಕು ಸಾರ್ವಜನಿಕ ಆಸ್ಪತ್ರೆ, ಯಲಬುರ್ಗಾ

24x7 ತುರ್ತು & ಒಪಿಡಿ ಸೇವೆ

2, 3 & 4. ತುರ್ತು & ಅಗತ್ಯ ಬೆಂಬಲ ಸೇವೆಗಳು

48 ಆಂಬ್ಯುಲೆನ್ಸ್‌ಗಳು, 18 ಜನೌಷಧಿ ಕೇಂದ್ರಗಳು & 4 ರಕ್ತನಿಧಿ ಜಾಲ

ಜಿಲ್ಲೆಯ ಸಾರ್ವಜನಿಕರಿಗೆ 24x7 ತುರ್ತು ಸಾರಿಗೆ, ಶೇ. 50-90 ರಿಯಾಯಿತಿ ದರದ ಜನರಿಕ್ ಔಷಧಗಳು ಹಾಗೂ 10,000 ಯುನಿಟ್ ಸಾಮರ್ಥ್ಯದ ರಕ್ತ ಭದ್ರತಾ ವ್ಯವಸ್ಥೆ.

7. ರಾಷ್ಟ್ರೀಯ ಆರೋಗ್ಯ ಅಭಿಯಾನ

ರಾಷ್ಟ್ರೀಯ ಆರೋಗ್ಯ ಅಭಿಯಾನದ 28 ಪ್ರಮುಖ ಕಾರ್ಯಕ್ರಮಗಳು

ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿರುವ 28 ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ಯೋಜನೆಗಳ ಅಧಿಕೃತ ವಿವರ.

ನವಜಾತ ಶಿಶು & ಪೌಷ್ಟಿಕ ಪುನರ್ವಸತಿ

ನವಜಾತ ಶಿಶು ಆರೈಕೆ (SNCU / NBSU) & 4 ಪೌಷ್ಟಿಕ ಪುನರ್ವಸತಿ ಕೇಂದ್ರಗಳು (NRC)

ತೀವ್ರ ಅನಾರೋಗ್ಯ ನವಜಾತ ಶಿಶುಗಳಿಗೆ ಜೀವ ರಕ್ಷಕ ಚಿಕಿತ್ಸೆ (30 ಹಾಸಿಗೆಗಳು) ಹಾಗೂ ತೀವ್ರ ಅಪೌಷ್ಟಿಕ ಮಕ್ಕಳಿಗೆ 14 ದಿನಗಳ ಉಚಿತ ಪೌಷ್ಟಿಕ ಪುನರ್ವಸತಿ – ರಾಷ್ಟ್ರೀಯ ಆರೋಗ್ಯ ಅಭಿಯಾನದ ನೆರವಿನೊಂದಿಗೆ.

SNCU UNIT 1 · DISTRICT HOSPITAL

ವಿಶೇಷ ನವಜಾತ ಶಿಶು ಆರೈಕೆ ಘಟಕ (SNCU), ಕೊಪ್ಪಳ

ಜಿಲ್ಲಾ ಆಸ್ಪತ್ರೆ ಕೊಪ್ಪಳದಲ್ಲಿ 20 ಹಾಸಿಗೆಗಳ ಅತ್ಯಾಧುನಿಕ SNCU ಘಟಕ. ತೀವ್ರ ಅನಾರೋಗ್ಯ, ಅಕಾಲಿಕ ಜನನ, ಕಾಮಾಲೆ ಹಾಗೂ ಉಸಿರಾಟ ತೊಂದರೆಯುಳ್ಳ ನವಜಾತ ಶಿಶುಗಳಿಗೆ 24x7 ತಜ್ಞ ವೈದ್ಯರಿಂದ ಉಚಿತ ಚಿಕಿತ್ಸೆ.

20 ಹಾಸಿಗೆಗಳು · 100% ಉಚಿತ
SNCU UNIT 2 · GANGAVATHI HOSPITAL

ವಿಶೇಷ ನವಜಾತ ಶಿಶು ಆರೈಕೆ ಘಟಕ (SNCU), ಗಂಗಾವತಿ

ಉಪವಿಭಾಗ ಸರ್ಕಾರಿ ಆಸ್ಪತ್ರೆ ಗಂಗಾವತಿಯಲ್ಲಿ 10 ಹಾಸಿಗೆಗಳ SNCU ಘಟಕ. ಗಂಭೀರ ಅನಾರೋಗ್ಯದಿಂದ ಬಳಲುವ ನವಜಾತ ಶಿಶುಗಳಿಗೆ ಗುಣಮಟ್ಟದ ಚಿಕಿತ್ಸಾ ಸೌಲಭ್ಯ.

10 ಹಾಸಿಗೆಗಳು · 100% ಉಚಿತ

5 ನವಜಾತ ಶಿಶು ಸ್ಥಿರೀಕರಣ ಘಟಕಗಳು (NBSU) – ಕಡಿಮೆ ತೂಕ & ಸೌಮ್ಯ ಕಾಯಿಲೆ ಶಿಶುಗಳ ಆರೈಕೆ

4 NUTRITION REHABILITATION CENTRES (NRC)

4 ಪೌಷ್ಟಿಕ ಪುನರ್ವಸತಿ ಕೇಂದ್ರಗಳು – ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ

ತೀವ್ರ ಅಪೌಷ್ಟಿಕತೆಯಿಂದ (SAM) ಬಳಲುವ ಮಕ್ಕಳಿಗೆ 14 ದಿನಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಚಿಕಿತ್ಸಾ ಪೌಷ್ಟಿಕ ಆಹಾರ, ಆಟ-ಪಾಠ ಚಟುವಟಿಕೆಗಳು ಹಾಗೂ ಜೊತೆಯಲ್ಲಿರುವ ಪೋಷಕರಿಗೆ ಉಚಿತ ಆಹಾರ ಮತ್ತು ದಿನಗೂಲಿ ನಷ್ಟ ಪರಿಹಾರ ಒದಗಿಸಲಾಗುತ್ತದೆ.

  • 14 ದಿನಗಳ ವಸತಿ ಸಹಿತ ದಾಖಲಾತಿ ಮತ್ತು ವೈದ್ಯಕೀಯ ನಿಗಾ
  • ಮಗುವಿಗೆ ಉಚಿತ ಔಷಧಿಗಳು ಮತ್ತು ಚಿಕಿತ್ಸಾ ಪೌಷ್ಟಿಕ ಆಹಾರ
  • ಜೊತೆಯಲ್ಲಿರುವ ತಾಯಿ/ಪೋಷಕರಿಗೆ ಉಚಿತ ಆಹಾರ ಹಾಗೂ ವೇತನ ನಷ್ಟ ಪರಿಹಾರ
  • ಬಿಡುಗಡೆಯ ನಂತರ ನಿಯಮಿತ ಅನುಸರಣಾ (Follow-up) ತಪಾಸಣೆ
ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಲಾಂಛನ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ

"ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ" ಯೋಜನೆಯಡಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು

ಉಚಿತವಾಗಿ ದೊರೆಯುವ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳು

  1. ಗರ್ಭಿಣಿ, ಬಾಣಂತಿ ಮತ್ತು ನವಜಾತ ಶಿಶುಗಳ ನೋಂದಣಿ, ಆರೈಕೆ, ಸಲಹೆ ಮತ್ತು ಚಿಕಿತ್ಸೆ.
  2. ಅರ್ಹ ದಂಪತಿಗಳಿಗೆ ತಾತ್ಕಾಲಿಕ ಮತ್ತು ಶಾಶ್ವತ ಗರ್ಭನಿರೋಧಕ ವಿಧಾನಗಳ ಸೇವೆಗಳು.
  3. ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು.
  4. ಕಣ್ಣು, ಕಿವಿ, ಗಂಟಲು ಮತ್ತು ಬಾಯಿ ಸಂಬಂಧಿ ರೋಗಗಳ ತಪಾಸಣೆ.
  5. ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಮೇಲ್ಮಟ್ಟದ ಆಸ್ಪತ್ರೆಗೆ ರೆಫರಲ್ ಸೇವೆ.
  6. ಆಪ್ತಸಮಾಲೋಚನೆ ಹಾಗೂ ಯೋಗಶಿಕ್ಷಣ ಸೌಲಭ್ಯ.
  7. ಎಬಿ-ಎಆರ್‌ಕೆ ಯೋಜನೆಯಡಿ ಎ.ಪಿ.ಎಲ್ ಮತ್ತು ಬಿ.ಪಿ.ಎಲ್ ಕುಟುಂಬಗಳಿಗೆ ಹೆಚ್ಚಿನ ಚಿಕಿತ್ಸೆಯನ್ನು ಮೇಲ್ದರ್ಜೆಯ ಆಸ್ಪತ್ರೆಗಳಲ್ಲಿ ನೀಡಲಾಗುವುದು.
  8. ಜಿಲ್ಲೆಯಾದ್ಯಂತ 193 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.
  9. ಹೆಚ್ಚಿನ ಮಾಹಿತಿಗಾಗಿ 24x7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ.
ಎಲ್ಲರಿಗೂ ಆರೋಗ್ಯ – ಎಲ್ಲೆಡೆಯೂ ಆರೋಗ್ಯಪ್ರಕಟಣೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಐ.ಇ.ಸಿ ವಿಭಾಗ, ಕೊಪ್ಪಳ
ಸಾರ್ವಜನಿಕ ಸೇವಾ ನಿರ್ದೇಶಿಕೆ

ನಾಗರಿಕ ಸಾರ್ವಜನಿಕ ಆರೋಗ್ಯ ಸೇವಾ ನಿರ್ದೇಶಿಕೆ

ಕೊಪ್ಪಳ ಜಿಲ್ಲೆಯಲ್ಲಿ ಲಭ್ಯವಿರುವ ಉಚಿತ ಚಿಕಿತ್ಸೆ, ತಪಾಸಣೆ, ಔಷಧಿ ಮತ್ತು ನೇರ ನಗದು ಸೌಲಭ್ಯಗಳು

ವಾರ್ಷಿಕ ಆರೋಗ್ಯ ಕ್ಯಾಲೆಂಡರ್

ಆರೋಗ್ಯ ಕ್ಯಾಲೆಂಡರ್ & ಚಟುವಟಿಕೆಗಳು

ಜಿಲ್ಲೆಯಾದ್ಯಂತ ಆಚರಿಸಲಾಗುವ 42 ಆರೋಗ್ಯ ದಿನಾಚರಣೆಗಳು, ಸಪ್ತಾಹಗಳು ಹಾಗೂ ಜಾಗೃತಿ ಅಭಿಯಾನಗಳು.

ಮುಂಬರುವ ದಿನಾಚರಣೆಗಳು
    ಚಟುವಟಿಕೆಗಳು

    ಇತ್ತೀಚಿನ ಆರೋಗ್ಯ ಜಾಗೃತಿ ಚಟುವಟಿಕೆಗಳು

    ದಿನಾಚರಣೆ ಕಾರ್ಯಕ್ರಮಗಳು, ಶಿಬಿರಗಳು ಮತ್ತು ಅಭಿಯಾನಗಳ ಚಿತ್ರಗಳು ಹಾಗೂ ವಿಡಿಯೋಗಳು

    ಅಧಿಕೃತ ಪ್ರಕಟಣೆಗಳು

    ಟೆಂಡರ್‌ಗಳು & ನೇಮಕಾತಿ

    ಇಲಾಖೆಯ ಇತ್ತೀಚಿನ ಟೆಂಡರ್ ಪ್ರಕಟಣೆಗಳು ಹಾಗೂ NHM / ಇಲಾಖಾ ಹುದ್ದೆಗಳ ನೇಮಕಾತಿ ಅಧಿಸೂಚನೆಗಳು.

    ವಿಷಯ ನಿರ್ವಾಹಕ (Admin)

    ಇಲ್ಲಿ ಸೇರಿಸಿದ ಫೋಟೋ / ವಿಡಿಯೋ / ಪ್ರಕಟಣೆಗಳು ತಕ್ಷಣ ವೆಬ್‌ಸೈಟ್‌ನಲ್ಲಿ ಕಾಣಿಸುತ್ತವೆ. ಸರ್ವರ್‌ಗೆ ಪ್ರಕಟಿಸಲು "Export" ಮಾಡಿ content.json ಫೈಲ್ ಅನ್ನು ವೆಬ್‌ಸೈಟ್ ಫೋಲ್ಡರ್‌ಗೆ ಅಪ್‌ಲೋಡ್ ಮಾಡಿ.
    ಗಣ್ಯರು & ಅಧಿಕಾರಿಗಳ ಹೆಸರು / ಫೋಟೋ
    ಮುಖಪುಟ ಸ್ಲೈಡರ್ ಫೋಟೋಗಳು
    ಪ್ರಕಟಣೆ ಚಿತ್ರಗಳು (ಸ್ಕ್ರೋಲಿಂಗ್)
    ಫೋಟೋ / ವಿಡಿಯೋ ಗ್ಯಾಲರಿ & ಚಟುವಟಿಕೆಗಳು
    ಟೆಂಡರ್ / ನೇಮಕಾತಿ ಪ್ರಕಟಣೆ
    ಸ್ಕ್ರೋಲಿಂಗ್ ಪ್ರಕಟಣೆ ಪಠ್ಯ (Marquee)
    ಬ್ಯಾಕಪ್